ಪ್ರಕೃತಿ ವಿಕೋಪದ ಸಂತ್ರಸ್ತರ ನೆರೆವಿಗಾಗಿ ಪರಿಹಾರ ಸಂಗ್ರಹಣೆ ಕಾರ್ಯಕ್ರಮ
ದಿನಾಂಕ:29/08/2018 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಾಮರಾಜನಗರ ಮತ್ತು ಸ್ಥಳೀಯ ಸಂಸ್ಥೆ ಯಳಂದೂರು ಹಾಗೂ GFGCನ ಭಗತ್ ಸಿಂಗ್ ರೋವರ್ ಕ್ರ್ಯೂ,BFGCನ NSS ಘಟಕ, ಬಿಳಿಗಿರಿ ರೋವರ್ ಕ್ರ್ಯೂ,GHPSಟೌನ್,ಲಯನ್ಸ್ ಶಾಲೆ, ಜೈಹಿಂದ್ ಓಪನ್ ರೋವರ್ ಕ್ರ್ಯೂ ಯಳಂದೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ "ಪ್ರಕೃತಿ ವಿಕೋಪದ ಸಂತ್ರಸ್ತರ ನೆರೆವಿಗಾಗಿ ಪರಿಹಾರ ಸಂಗ್ರಹಣ ಜಾಥಾ ಕಾರ್ಯಕ್ರಮ" ಹಾಗೂ "ರಕ್ಷಾ ಬಂಧನ"ಕಾರ್ಯಕ್ರಮವನ್ನು ಆಯೋಜಿಲಾಗಿತ್ತು ಇದರಲ್ಲಿ ಎಲ್ಲರೂ ಸಹೋದರತ್ವದಿಂದ ರಕ್ಷೆಯೆನ್ನು ಪರಸ್ಪರವಾಗಿ ಕಟ್ಟಲಾಯಿತ್ತು ನಂತರ GFGCನ ಪ್ರಾಧ್ಯಾಪಕರಾದ ಶ್ರೀ ಥಿಯೋಡರ್ ಲೂಥರ್ ರವರು ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಹಸಿರು ನಿಶಾನೆ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಯಳಂದೂರು ಪಟ್ಟಣದ ಮನೆಗಳು,ಅಂಗಡಿಗಳು, ಸಾರ್ವಜನಿಕ ಸ್ಥಳಗಳಲ್ಲಿ ನಿಧಿ ಸಂಗ್ರಹಣೆ ಮಾಡಲಾಯಿತ್ತು ನಂತರ ಬಳೇಮಂಟಪ ದೇವಾಲಯದಲ್ಲಿ ಸಂಗ್ರಹಣೆ ಮಾಡಿದ ಹಣವನ್ನು ಸ್ವಯಂ ಸೇವಕ/ಕಿ ಮತ್ತು ರೋವರ್ಸ ಗಳು ಎಣಿಕೆ ಮಾಡಲಾಯಿತ್ತು ಒಟ್ಟು ಮೊತ್ತ 11.958.00 ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು ನಂತರ ಹಣವನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಲಾಯಿತ್ತು ಮತ್ತು ಈ ಕಾರ್ಯಕ್ರಮಕ್ಕೆ NSS ಘಟಕದ ಸ್ವಯಂ ಸೇವಕ/ಕಿಯರು, ರೋವರ್ಸಗಳು, ಸ್ಕೌಟ್ ಮಕ್ಕಳು ಮತ್ತು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ರಂಗಸ್ವಾಮಿ, NSS ಶಿಬಿರಾಧಿಕಾರಿ ಡಾ.ಶಿವರುದ್ರಪ್ಪ, ಸಹಶಿಬಿರಾಧಿಕಾರಿ ಹೆಚ್.ಎಸ್. ಪದ್ಮ,ಸ್ಕೌಟ್ ಮಾಸ್ಟರ್ ಸಂಜೀವಮೂರ್ತಿ, ರೇವಣ್ಣ,RSL ಮಹಂತೇಶ್, ಪ್ರದೀಪ್. ಎಸ್ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.